+91-8482-245241 regkvafsu@gmail.com

ಸೌಲಭ್ಯಗಳು

  • ಬಿವಿಎಸ್ಸಿ & ಎಎಚ್ ಮತ್ತು ಎಂವಿಎಸ್ಸಿ ಪದವಿ ಕೋರ್ಸುಗಳನ್ನು ಬೋಧಿಸಲು ಸುಸಜ್ಜಿತ ಪ್ರಯೋಗಾಲಯಗಳನ್ನು ಒಳಗೊಂಡ ವಿವಿಧ ವಿಭಾಗಗಳಿವೆ.
  • ಕಾಲೇಜು ಆವರಣದ ಒಳಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಆಧುನಿಕ ವಸತಿನಿಲಯಗಳಿವೆ.
  • ಸಭೆ, ಸಮಾರಂಭ ನಡೆಸಲು ಮತ್ತು ತರಬೇತಿಗಾಗಿ ವಿಶಾಲ ಸಭಾಂಗಣಗಳಿವೆ.
  • ನೂರೈವತ್ತಕ್ಕೂ ಹೆಚ್ಚು ಜನರು ಕೂರಬಹುದಾದ ಉಪನ್ಯಾಸ ಕೊಠಡಿಗಳಿವೆ.
  • ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣಗಳು ಮತ್ತು ಜಿಮ್ ವ್ಯವಸ್ಥೆ ಹೊಂದಿದ ವಿಶಾಲ ಕ್ರೀಡಾ ಸಂಕೀರ್ಣವಿದೆ.
  • ರೈತರ ಜಾನುವಾರುಗಳಾದ ಹಸು, ಎಮ್ಮೆ, ಕುರಿ, ಮೇಕೆ, ಮೊಲ, ಹಂದಿಗಳಿಗೆ, ನಗರವಾಸಿಗಳ ಮುದ್ದು ಪ್ರ್ರಾಣಿಗಳಾದ ನಾಯಿ - ಬೆಕ್ಕುಗಳಿಗೆ, ಕೆಲವೊಮ್ಮೆ ವನ್ಯಜೀವಿಗಳ ಆರೋಗ್ಯ ಕಾಳಜಿಗೆ ಸುಸಜ್ಜಿತವಾದ ಪಶು ಆಸ್ಪತ್ರೆಯಿದೆ.
  • ಜಾನುವಾರುಗಳನ್ನು ದೂರದ ಊರಿನಿಂದ ಕರೆದು ತರಲು ಧನ್ವಂತರಿ ಆಂಬುಲೆನ್ಸ್ ವಾಹನದ ಸೇವೆಯಿದೆ.
  • ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಜಾನುವಾರುಗಳಿಗೆ ಒಳರೋಗಿಗಳ ಸೇವೆ ಮತ್ತು ರೈತರು ತಂಗಲು ಬೇಕಾದ ವ್ಯವಸ್ಥೆಯಿದೆ.
  • ಮೇವಿನ ಸಂಗ್ರಹಾಲಯ: ವಿವಿಧ ಮೇವಿನ ಬೆಳೆಗಳ ತಾಕುಗಳಿದ್ದು ಹವಾಮಾನಕ್ಕೆ ಜಾನುವಾರುಗಳಿಗೆ ಹೊಂದಿಕೊಳ್ಳುವಂತಹ ಮೇವಿನ ಹುಲ್ಲುಗಳನ್ನು, ಮೇವಿನ ಗಿಡಮರಗಳನ್ನು, ವಾರ್ಷಿಕ ಮತ್ತು ಬಹುವಾರ್ಷಿಕ ಬೆಳೆಗಳನ್ನು ರೈತರಿಗೆ ಕಡಿಮೆ ದರದಲ್ಲಿ ವಿತರಿಸಲಾಗುತ್ತಿದೆ.
  • ಪ್ರಯೋಗಾಲಯ ಪ್ರಾಣಿಗಳು ಮತ್ತು ಜಾನುವಾರುಗಳಲ್ಲಿ ಸಂಶೋಧನೆ ನಡೆಸಲು ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆದು ನೋಂದಣಿಯಾದ ಪ್ರಾಣಿ ನೀತಿಕಟ್ಟಳೆ ಸಮಿತಿಯಿದೆ.
  • ಬೋಧನೆಗೆ ಪೂರಕವಾದ ಮತ್ತು ಆಧ್ಯಯನಕ್ಕೆ ಅನುಕೂಲವಾಗುವಂತಹ ಸುಸಜ್ಜಿತ ಗ್ರಂಥಾಲಯ, ಹತ್ತು ಸಾವಿರಕ್ಕೂ ಅಧಿಕ ನೂತನ ಆವೃತ್ತಿಯ ಪಶುವೈದ್ಯಕೀಯ ಹಾಗೂ ಪಶುಪಾಲನೆಗೆ ಸಂಬಂಧಪಟ್ಟ ಪುಸ್ತಕಗಳು, ಕನ್ನಡ ಮತ್ತು ಆಂಗ್ಲ ದಿನ ಪತ್ರಿಕೆಗಳು, ಈ-ಆಕ್ಸ್ಸೆಸ್ ಜರ್ನಲ್‍ಗಳ ವ್ಯವಸ್ಥೆ, ಉಚಿತ ಅಂತರಜಾಲ ವ್ಯವಸ್ಥೆ, ವ್ಯಕ್ತಿತ್ವ ವಿಕಸನ ಮತ್ತು ಐ.ಎ.ಎಸ್, ಕೆ.ಎ.ಎಸ್ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಅನೇಕ ಪತ್ರಿಕೆಗಳು ಮತ್ತು ಪುಸ್ತಕಗಳ ವ್ಯವಸ್ಥೆಯಿದೆ.
  • ಕೋಳಿ ಸಾಕಾಣಿಕೆ ಘಟಕ, ಹಂದಿ ಸಾಕಾಣಿಕೆ ಘಟಕ, ಪಶು ಆಹಾರ ಸಂಸ್ಕರಣಾ ಘಟಕ
  • ಹ್ಯಾಚರಿ ಕೇಂದ್ರ: ಕೋಳಿ ಮರಿಮಾಡುವ ಕೇಂದ್ರ
  • ವಿದ್ಯಾರ್ಥಿಗಳು ಮತ್ತು ರೈತಕ ಕಲಿಕೆಗೆ ಪೂರಕವಾದ ಆಧುನಿಕ ಪ್ರಾಣಿ ವಧಾಗಾರ
  • ಬೋಧಕ ಬೋಧಕೇತರ ವರ್ಗದವರಿಗೆ ಎ.ಬಿ.ಸಿ ಮತ್ತು ಡಿ ಮಾದರಿ ವಸತಿಗೃಹಗಳು
  • ಅಧಿಕಾರಿಗಳು ತಂಗಲು ಅತಿಥಿ ಗೃಹ
  • ವಿವಿಧ ಮಾದರಿಯ ಔಷಧೀಯ ಸಸ್ಯಗಳ ಸಂಗ್ರಹಾಲಯ
  • ಆವರಣಕ್ಕೆ ಹೊಂದಿಕೊಂಡಂತಹ ಕೆರೆಯಲ್ಲಿ ಮೀನು ಸಾಕಾಣಿಕಾ ಘಟಕ