ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ಒಳನಾಡು), ಹೆಸರಘಟ್ಟ
ಕರ್ನಾಟಕ ರಾಜ್ಯವು ವಿಶಾಲವಾದ ಒಳನಾಡಿನ ಜಲಸಂಪನ್ಮೂಲಗಳನ್ನು ಹೊಂದಿದ್ದು ಜಲಕೃಷಿಗೆ ಅಪಾರವಾದ ಅವಕಾಶಗಳಿವೆ. ಆದ್ದರಿಂದ, ರಾಜ್ಯದಲ್ಲಿ ನಿರಂತರ ಮೀನುಗಾರಿಕೆ ಅಭಿವೃದ್ದಿಗೆ ಜಲಸಂಪನ್ಮೂಲಗಳ ವೈಜ್ಞಾನಿಕ ನಿರ್ವಹಣೆಯ ಅವಶ್ಯಕತೆ ಇದೆ. ಕೇಂದ್ರವು 1960ರಲ್ಲಿ ಸ್ಥಾಪನೆಯಾಯಿತು. 1966ರಲ್ಲಿ ರಾಜ್ಯದ ಒಳನಾಡು ಮೀನುಗಾರಿಕೆಯನ್ನು ಹೆಚ್ಚಿಸಲು ಸಂಶೋಧನಾ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕೃಷಿ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲ್ಪಟ್ಟಿತು. 2005 ರಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಅಡಿಯಲ್ಲಿ ‘ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ಒಳನಾಡು)’ ಎಂದು ಮರುನಾಮಕರಣ ಮಾಡಲಾಯಿತು. ಇದು ರಾಜ್ಯದ ಪ್ರಮುಖ ಒಳನಾಡಿನ ಸಂಶೋಧನಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರಿಗೆ ಸೇವೆಗಳನ್ನು ಮತ್ತು ಮೀನುಗಾರಿಕಾ ಇಲಾಖೆಗೆ ಅಮೂಲ್ಯವಾದ ಸಲಹೆಗಳನ್ನು ನೀಡುತ್ತ್ತಿದೆ. ಈ ಕೇಂದ್ರವು ಬೆಂಗಳೂರು ನಗರದಿಂದ 26 ಕಿಲೋಮೀಟರ್ ದೂರದಲ್ಲಿ ಹೆಸರಘಟ್ಟ ಸರೋವರದ ಪಕ್ಕದಲ್ಲಿದೆ.
ವಿಭಾಗದ ಉದ್ದೇಶಗಳು:
• ಮಿಶ್ರ ತಳಿ ಮೀನು ಪಾಲನೆ ಮತ್ತು ಒಳನಾಡು ಸೀಗಡಿ ಸಾಕಣೆ ಬಗ್ಗೆ ಪ್ರಾತ್ಯಕ್ಷಿಕೆ.
• ಸುಧಾರಿತ ಮೀನುಮರಿ ತಳಿಗಳ ಉತ್ಪಾದನೆ ಮತ್ತು ಸಾಕಾಣಿಕೆ ತಾಂತ್ರಿಕತೆಗಳ ಬಗ್ಗೆ ಪ್ರಾತ್ಯಕ್ಷಿಕೆ.
• ಮೀನು ಅನುವಂಶೀಯತೆ, ಮೀನು ಮರಿ ಉತ್ಪತ್ತಿ, ಮೀನು ಆಹಾರ ತಯಾರಿಕೆ.
• ಮೀನು ಆರೋಗ್ಯ, ಮೀನು ಸಾಕಣೆ ಮತ್ತು ಮಾರಾಟಗಳ ಬಗ್ಗೆ ಸಂಶೋಧನೆ.