+91-8482-245241 regkvafsu@gmail.com

ಜಾನುವಾರು ಸಂಶೋಧನಾ ಮತ್ತು ಮಾಹಿತಿ ಕೇಂದ್ರ (ಅ), ಕೊನೇಹಳ್ಳಿ

ಜಾನುವಾರು ಸಂಶೋಧನಾ ಮತ್ತು ಮಾಹಿತಿ ಕೇಂದ್ರ (ಅಮೃತ್ ಮಹಲ್), ಕೊನೇಹಳ್ಳಿ, ತಿಪಟೂರು ಇಲ್ಲಿನ ಆವರಣದಲ್ಲಿ 2011-12ನೇ ಸಾಲಿನಲ್ಲಿ ಸರ್ಕಾರದ ಆದೇಶ ಸಂ: ಪಸಂಮೀ 116 ಪಸಸೇ 2011 ರನ್ವಯ ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜನ್ನು ಆರಂಭಿಸಲಾಯಿತು. ಹತ್ತನೇ ತರಗತಿ ತೇರ್ಗಡೆ ಹೊಂದಿದ ಹಾಗೂ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲೇ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಪಶುಸಂಗೋಪನೆ ವಿಷಯದಲ್ಲಿ ಡಿಪ್ಲೋಮಾ ವ್ಯಾಸಂಗವನ್ನು ನೀಡಲಾಗುತ್ತಿದೆ. ಗ್ರಾಮೀಣ ಯುವಕರಿಗೆ ಸ್ವ-ಉದ್ಯೋಗ ಮತ್ತು ಉದ್ಯಮಶೀಲತಾ ಅನುಭವವನ್ನು ನೀಡುವ ಸದುದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 313 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸಂಸ್ಥೆಯಿಂದÀ ಡಿಪ್ಲೋಮಾ ಪಡೆದುಕೊಂಡಿದ್ದು, ಹೈನು, ಕುಕ್ಕುಟ ಮತ್ತು ಹಂದಿ ಸಾಕಾಣಿಕೆ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಕೆಲವರು ಉದ್ಯಮಶೀಲರಾಗಿ ಯಶಸ್ವಿಯಾಗಿದ್ದಾರೆ.

ಸಿಬ್ಬಂದಿಗಳ ವಿವರ:

ಪ್ರಾಚಾರ್ಯರು ಮತ್ತು ಸಹಾಯಕ ಪ್ರಾಧ್ಯಾಪಕರು


ಡಾ. ಉಮಾಶಂಕರ್, ಬಿ. ಸಿ
ಎಮ್.ವಿ.ಎಸ್‍ಸ್ಸಿ., ಪಿ.ಹೆಚ್.ಡಿ.
ಮಿಂಚಂಚೆ: umashankarbukkapattana@gmail.com
ಮೊಬೈಲ್ ಸಂಖ್ಯೆ: 9845733623

ವೃತ್ತಿ ವಿವರ:

ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಪೂರ್ಣಗೊಳಿಸಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ 14 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ದಿನಾಂಕ 08.09.2012 ರಂದು ವಿಶ್ವವಿದ್ಯಾಲಯದ ಸೇವೆಗೆ ಸೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಪಶು ಸಂಗೋಪನಾ ಪಾಲಿಟೆಕ್ನಿಕ್, ಕೊನೆಹಳ್ಳಿಯಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಶುಸಂಗೋಪನಾ ಪಾಲಿಟೆಕ್ನಿಕ್, ಕೊನೇಹಳ್ಳಿಯ ಆಡಳಿತಾತ್ಮಕ ನಿರ್ವಹಣೆ, ಡಿಪ್ಲೋಮಾ ವ್ಯಾಸಂಗಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿ ಹಾಗೂ ನಿರ್ವಹಣೆ, ವಿದ್ಯಾರ್ಥಿನಿಲಯಗಳ ನಿರ್ವಹಣೆ, ಸಿಬ್ಬಂದಿ ನಿರ್ವಹಣೆ, ಹಾಗೂ ಡಿಪ್ಲೋಮಾ ಕೋರ್ಸ್‍ಗಳ ಬೋಧನೆ, ಮೇವು ಅಭಿವೃದ್ಧಿ, ಜಾನುವಾರು ನಿರ್ವಹಣೆ, ರೈತರ ಅನುಕೂಲಕ್ಕಾಗಿ ಹಲವಾರು ತರಬೇತಿ ಕಾರ್ಯಕ್ರಮಗಳ ಆಯೋಜನೆ, ಪ್ರಾತ್ಯಕ್ಷಿಕೆಗಳ ನಿರ್ವಹಣೆ, ಕ್ಷೇತ್ರ ದಿವಸ ಆಚರಣೆ ಹಾಗೂ ಜಾನುವಾರು ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆಯನ್ನು ನಡೆಸಲಾಗುತ್ತಿದೆ.

ಪ್ರಕಟಣೆಗಳು : ಸಂಶೋಧನೆ / ವಿಸ್ತರಣೆ / ಇನ್ನಿತರ ಲೇಖನಗಳು : 25

ಸಂಪರ್ಕಿಸಿ:
ಪ್ರಾಂಶುಪಾಲರು,
ಪಶುಸಂಗೋಪನಾ ಪಾಲಿಟೆಕ್ನಿಕ್, ಕೊನೇಹಳ್ಳಿ, ತಿಪಟೂರು ತಾ
ತುಮಕೂರು ಜಿಲ್ಲೆ
ಕರ್ನಾಟಕ- 572201
ಮಿಂಚಂಚೆ: ahpkonehally@gmail.com
ಮೊಬೈಲ್ ಸಂಖ್ಯೆ: 9845733623