ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ(ಕುರಿ), ನಾಗಮಂಗಲ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಡಿಯಲ್ಲಿದ್ದ ಕೃಷಿ ಸಂಶೋಧನಾ ಕೇಂದ್ರ, ನಾಗಮಂಗಲವು ದಿನಾಂಕ: 01.04.2005ರಿಂದ ಕಪಪಮೀವಿವಿ, ಬೀದರ್ನ ವ್ಯಾಪ್ತಿಗೆ ವರ್ಗಾವಣೆಗೊಂಡು ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ಕುರಿ), ನಾಗಮಂಗಲ ಎಂಬ ಹೆಸರಿನಿಂದ ಕಾರ್ಯನಿರ್ವಹಿಸುತ್ತಿದೆ. 47.0 ಹೆಕ್ಟೇರ್ ವಿಸ್ತೀರ್ಣದ ಈ ಸಂಸ್ಥೆಯ ಮೂಲ ಉದ್ದೇಶ ಬಂಡೂರು ತಳಿ ಕುರಿಯನ್ನು ಸಂರಕ್ಷಿಸಿ ನಿರ್ವಹಣೆ ಮಾಡಿಕೊಂಡು ಕುರಿ ಉತ್ಪಾದನೆ, ಆರೋಗ್ಯ, ಬೆಳವಣಿಗೆ, ಪೌಷ್ಠಿಕಾಂಶ ಹಾಗೂ ಕುರಿ ಸಂಗೋಪನೆ ಬಗ್ಗೆ ಸಂಶೋಧನೆ ಕೈಗೊಂಡು ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆಗಳನ್ನೊಳಗೊಂಡಿರುತ್ತದೆ. 2009-10ನೇ ಸಾಲಿನಿಂದ ಸಂಸ್ಥೆಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಧನಸಹಾಯದ ಮೆಗಾ ಶೀಪ್ ಸೀಡ್ ಯೋಜನೆಯಲ್ಲಿ ಮಂಡ್ಯ ಕುರಿ ಸಾಕಾಣಿಕೆ ಚಾಲ್ತಿಯಲ್ಲಿದ್ದು, ರೈತರ ಕುರಿ ಅಭಿವೃದ್ದಿಗೋಸ್ಕರ ಪ್ರತಿ ವರ್ಷ 50 ಉತ್ಕøಷ್ಟ ಬಂಡೂರು ಟಗರುಗಳನ್ನು ವಿತರಿಸಲಾಗುತ್ತಿದೆ. ಇದುವರೆಗೂ ಒಟ್ಟು 435 ಉತ್ಕøಷ್ಟ ಬಂಡೂರು ಟಗರುಗಳನ್ನು ರೈತರ 16035 ಕುರಿಗಳ ಸಂವರ್ಧನೆಗಾಗಿ ವಿತರಿಸಲಾಗಿದೆ.