ಪಶುಸಂಗೋಪನಾ ಪಾಲಿಟೆಕ್ನಿಕ್, ದೋರನಹಳ್ಳಿ, ಶಹಪುರ, ಯಾದಗಿರಿ ಜಿಲ್ಲೆ
ದೋರನಹಳ್ಳಿಯ ಪಶುಸಂಗೋಪನಾ ಪಾಲಿಟೆಕ್ನಿಕ್ ಸಂಸ್ಥೆಯು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿದೆ. ಈ ಸಂಸ್ಥೆಯು 2017-18 ರಿಂದ ಕಾರ್ಯನಿರ್ವಹಿಸುತ್ತಿದೆ. ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಗೆ ಹತ್ತಿರದಲ್ಲಿದೆ. ಎರಡು ವರ್ಷಗಳ (ನಾಲ್ಕು ಸೆಮಿಸ್ಟರ್) ‘ಪಶು ಸಂಗೋಪನಾ ಡಿಪ್ಲೊಮಾ’ ಪ್ರಮಾಣ ಪತ್ರವನ್ನು ಪಡೆಯಲು ಪ್ರತಿ ವರ್ಷ ಈ ಸಂಸ್ಥೆಗೆ ಹತ್ತನೇ ತರಗತಿ ಪೂರ್ಣಗೊಳಿಸಿದ ಸುಮಾರು 50 ಗ್ರಾಮೀಣ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ರೈತರಿಗಾಗಿ ಮೇವು ಉತ್ಪಾದನೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಮತ್ತಿತರ ತರಬೇತಿ ನೀಡಲಾಗುತ್ತ್ತಿದೆ.
ಪ್ರಾಂಶುಪಾಲರು
ಡಾ. ಶೇಷರಾವ
ಎಮ್.ವಿ.ಎಸ್.ಸಿ ಮತ್ತು ಪಿ.ಎಚ್.ಡಿ
ಮಿಂಚಂಚೆ: drraoiahvb@gmail.com
ಮೊಬೈಲ್ ಸಂಖ್ಯೆ: 8197734057
ವೃತ್ತಿ ವಿವರ: ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಮಂಗಳೂರು, ಇಲ್ಲಿ 2 ವರ್ಷ ವಿಜ್ಞಾನಿಯ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಾಯಿತು. ನಂತರ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಕಲಬುರ್ಗಿಯಲ್ಲಿ 8 ವರ್ಷ ವಿಜ್ಞಾನಿಯ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಾಯಿತು. ನಂತರ ಉನ್ನತ ವ್ಯಾಸಂಗಕ್ಕಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು ಇಲ್ಲಿ ಪಿ.ಎಚ್.ಡಿ ಪದವಿ ಪಡೆದು Sಖಆಆಐ ನಲ್ಲಿ ಕಾರ್ಯನಿರ್ವಹಿಸಲಾಯಿತು. ತಮಿಳುನಾಡು ಮತ್ತು ಕೇರಳ ರಾಜ್ಯಗಳ ಉಸ್ತುವಾರಿಯಾಗಿ ಕಾರ್ಯನೇರವೇರಿಸಲಾಯಿತು. ಈಂಔ ಅಡಿಯಲ್ಲಿ 10ದಿನ ಪಾಕಿಸ್ತಾನದಲ್ಲಿ ತರಬೇತಿ ಪಡೆಯಲಾಯಿತು. ನಂತರ ಡೈರಿ ಮಹಾವಿದ್ಯಾಲಯ ಕಲಬುರಗಿ ಇಲ್ಲಿ ಅತಿಥಿ ಪ್ರಾಧ್ಯಾಪಕರಾಗಿ 4 ವರ್ಷ ಕೆಲಸ ಹಾಗೂ 2015ರಿಂದ 2018 ರವರೆಗೆ ಕ್ಷೇತ್ರ ಅಧೀಕ್ಷಕರಾಗಿ ಎಮ್ಮೆ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ, ದೋರನಹಳ್ಳಿಯಲ್ಲಿ ಮತ್ತು ಪ್ರಾಂಶುಪಾಲರಾಗಿ ಪಶು ಸಂಗೋಪನಾ ಪಾಲಿಟೆಕ್ನಿಕ್ ದೋರನಹಳ್ಳಿ ಶಹಾಪೂರ ಇಲ್ಲಿ ಕೆಲಸದ ಅನುಭವವಿರುತ್ತದೆ. ವಿಶ್ವವಿದ್ಯಾಲಯದ ವಿಸ್ತರಣಾ ಆಧಾರಿತ ಸುಜಲಾ-III ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ರೈತರಿಗೆ ಮತ್ತು ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ವಿಧ್ಯಾರ್ಥಿಗಳ ಸಲಹೆಗಾರರಾಗಿ, ಪ್ರವಾಸ ತಂಡದ ನಾಯಕರಾಗಿ ಕಾರ್ಯನಿರ್ವಹಿಸಲಾಗಿದೆ. ಈಗ ಪಶು ಸಂಗೋಪನಾ ಪಾಲಿಟೆಕ್ನಿಕ್ ದೋರನಹಳ್ಳಿಯ ಪ್ರಾಂಶುಪಾಲರಾಗಿ ಹೆಚ್ಚುವರಿ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ.
ಪ್ರಶಸ್ತಿ ವಿವರ: ಉತ್ತಮ ಪಶುವೈದ್ಯ ಪ್ರಶಸ್ತಿ ಮತ್ತು 3 ಇನ್ನಿತರೇ ಪ್ರಶಸ್ತಿಗಳು
ಪ್ರಕಟಣೆಗಳು : ಸಂಶೋಧನೆ 15, ವಿಸ್ತರಣೆ 10, ಇನ್ನಿತರ ಲೇಖನಗಳು 5
ಸಂಪರ್ಕಿಸಿ:
ಪ್ರಾಂಶುಪಾಲರು,
ಪಶುಸಂಗೋಪನಾ ಪಾಲಿಟೆಕ್ನಿಕ್, ದೋರನಹಳ್ಳಿ
ತಾ. ಶಹಾಪೂರ ಯಾದಗಿರಿ ಜಿಲ್ಲೆ
ಕರ್ನಾಟಕ-585223
ಮಿಂಚಂಚೆ: ahpdornalli@kvafsu.edu.in
ಮೊಬೈಲ್ ಸಂಖ್ಯೆ: 8197734057