ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ (ಒಳನಾಡು), ಹೆಬ್ಬಾಳ
ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ (ಒಳನಾಡು) ಹೆಬ್ಬಾಳ, ಬೆಂಗಳೂರು ಸಂಸ್ಥೆಯು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ 2005ರಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಸುಪರ್ದಿಗೆ ಬಂದಿತು. ಹೆಬ್ಬಾಳ ಹೊರವರ್ತುಲ ರಸ್ತೆಯ ಪಕ್ಕದಲ್ಲಿರುವ ಹೆಬ್ಬಾಳ ಕೆರೆಯ ಹಿನ್ನೀರಿಗೆ ಹೊಂದಿಕೊಂಡಂತೆ 20 ಎಕರೆ ಪ್ರದೇಶದಲ್ಲಿ ಈ ಸಂಸ್ಥೆಯಿದೆ. ಒಳನಾಡು ಮೀನುಗಾರಿಕೆಯಲ್ಲಿ ಸಂಶೋಧನೆ ಮತ್ತು ವಿಸ್ತರಣೆ ಚಟುವಟಿಕೆಗಳನ್ನು ನಡೆಸಲು ಮತ್ತು ಜಲಚರ ಸಾಕಣೆಯ ಸಂಶೋಧನೆ ಮತ್ತು ವಿಸ್ತರಣೆ ನಡೆಸುವುದು ಮೂಲ ಉದ್ದೇಶವಾಗಿದೆ. ಕೇಂದ್ರದಲ್ಲಿ ಅತ್ಯುತ್ತಮ ಪ್ರಯೋಗಾಲಯ ಮತ್ತು ಕ್ಷೇತ್ರ ಸೌಲಭ್ಯಗಳಿವೆ. ಕೇಂದ್ರವು ಮಣ್ಣು ಮತ್ತು ನೀರಿನ ವಿಶ್ಲೇಷಣೆ, ಮೀನು ಆರೋಗ್ಯ ತಪಾಸಣೆ, ಜಲವಾಸಿ ಪರಿಸರ ಮೇಲ್ವಿಚಾರಣೆ, ಮೀನು ತಳಿಶಾಸ್ತ್ರ್ತ ಮತ್ತು ಜೈವಿಕ ತಂತ್ರಜ್ಞಾನ ಸಂಶೋಧನೆಗಾಗಿ ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದೆ. ಮೀನು ಮತ್ತು ಸೀಗಡಿ ಮರಿಗಳು, ಹಾಗೂ ಅಲಂಕಾರಿಕ ಮೀನುಗಳು, ಸಲಹಾ ಸೇವೆಗಳ ರೂಪದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವುದು ಕೇಂದ್ರದ ಚಟುವಟಿಕೆಗಳಾಗಿವೆ.
ಕೇಂದ್ರದ ಉದ್ದೇಶಗಳು:
• ಮಿಶ್ರ ಮೀನು ಸಾಕಾಣಿಕೆ ಮತ್ತು ಸಿಹಿನೀರಿನ ಸೀಗಡಿ ಸಾಕಾಣಿಕೆಯನ್ನು ಪ್ರದರ್ಶಿಸುವುದು.
• ಒಳನಾಡಿನ ಜಲಚರ ಸಾಕಾಣಿಕೆಗೆ ಸೂಕ್ತವಾದ ಮೀನು ಹಾಗೂ ಅದರ ಸಂತಾನೋತ್ಪತ್ತಿ ಮತ್ತು ಪಾಲನೆಗಾಗಿ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸುವುದು.
• ಅಲಂಕಾರಿಕ ಮೀನು ಉತ್ಪಾದನೆಯ ಮೂಲಕ ಆದಾಯವನ್ನು ಹೆಚ್ಚಿಸುವುದು.
• ಒಳನಾಡಿನ ಮೀನು ಮತ್ತು ಸೀಗಡಿ ಪ್ರಭೇದಗಳ ಬಗ್ಗೆ ತಳಿಶಾಸ್ತ್ರ, ಸಂತಾನೋತ್ಪತ್ತಿ, ಪೋಷಣೆ, ಆರೋಗ್ಯ, ಪಾಲನಾ ಪದ್ಧತಿ ಮತ್ತು ಮಾರುಕಟ್ಟೆ ಕುರಿತು ಸಂಶೋಧನೆ ಮತ್ತು ವಿಸ್ತರಣೆ.
• ಮಣ್ಣು ಮತ್ತು ನೀರಿನ ಪರೀಕ್ಷೆ, ಮೀನುಗಳ ರೋಗನಿರ್ಣಯ ಇತ್ಯಾದಿ ಸೇವೆಗಳನ್ನು ಒದಗಿಸುವುದು.
• ಆಧುನಿಕ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ: ಬಯೋಫ್ಲಾಕ್ ಮತ್ತು ಅಕ್ವಾಫೋನಿಕ್ಸ್.