ಪಶುಸಂಗೋಪನಾ ಪಾಲಿಟೆಕ್ನಿಕ್, ಬರಗಿ, ಗುಂಡ್ಲುಪೇಟೆ
ಬರಗಿ ಪಶುಸಂಗೋಪನಾ ಪಾಲಿಟೆಕ್ನಿಕ್ ಸಂಸ್ಥೆಯನ್ನು 09.10.2017ರಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ, ಇದರ ಅಂಗಸಂಸ್ಥೆಯಾಗಿ ಪ್ರಾರಂಭವಾಯಿತು. ಈ ಸಂಸ್ಥೆಯು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕಡಸು ಉತ್ಪಾದನೆ ಮತ್ತು ತರಬೇತಿ ಕೇಂದ್ರ, ಬರಗಿ, ಗುಂಡ್ಲುಪೇಟೆ ತಾಲ್ಲೂಕು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ಹತ್ತನೇ ತರಗತಿ ಪೂರ್ಣಗೊಳಿಸಿದ 50 ಗ್ರಾಮೀಣ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯುತ್ತಾರೆ. ಕಾಲೇಜಿನಲ್ಲಿ ಮೂರು ಬೋಧಕ ಮತ್ತು ಹದಿನಾರು ಬೋಧಕೇತರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪಶುಸಂಗೋಪನಾ ಪಾಲಿಟೆಕ್ನಿಕ್‍ನಲ್ಲಿ ಜಾನಾವಾರು ಸಾಕಾಣಿಕೆ, ಕೃಷಿ ಚಟುವಟಿಕೆ ಜೊತೆಗೆ ರೈತರಿಗೆ ಹಸು ಸಾಕಾಣಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ರಸಮೇವು ತಯಾರಿಕೆ ಮತ್ತು ಮೇವು ಪೌಷ್ಟೀಕರಣದ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ.
ಸಿಬ್ಬಂದಿಗಳ ವಿವರ
ಪ್ರಾಂಶುಪಾಲರು
ಹೆಸರು: ಡಾ. ರವಿಕುಮಾರ್, ಸಿ.
ವಿದ್ಯಾರ್ಹತೆ: ಬಿ.ವಿ.ಎಸ್ಸಿ & ಎಎಚ್., ಎಂ.ವಿ.ಎಸ್ಸಿ, ಪಿಎಚ್.ಡಿ
ಮೊಬೈಲ್ ಸಂಖ್ಯೆ: 9916588675
ಮಿಂಚಂಚೆ: drravivet4u@gmail.com
ವೃತ್ತಿ ವಿವರ: ಬಿ.ವಿ.ಎಸ್ಸಿ. ಮತ್ತು ಎ.ಎಚ್. ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಷಯದ ಬೋಧನೆ; ಭಾರತ ಸರ್ಕಾರದ ವತಿಯಿಂದ ಸಿ.ಪಿ.ಸಿ.ಎಸ್.ಇ.ಎ ನಾಮಿನಿಯಾಗಿ ಆಯ್ಕೆಯಾಗಿರುತ್ತಾರೆ; ಪ್ರಾಯೋಗಿಕ ಪ್ರಾಣಿಗಳ ವಿಭಾಗಕ್ಕೆ ಸದಸ್ಯ ಕಾರ್ಯದರ್ಶಿ ಹಾಗೂ ಅದರ ವ್ಯವಸ್ಥೆಯ ಮೇಲ್ವಿಚಾರಣೆ; ಔಷಧ ಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದ ಹಲವಾರು ಸಂಶೋಧನೆಗಳಿಗೆ ಪ್ರಮುಖ ಸಂಶೋಧಕರಾಗಿ ಕಾರ್ಯನಿರ್ವಹಣೆ.
ಪ್ರಶಸ್ತಿಗಳು: 2017 ರಲ್ಲಿ ಪ್ಯಾರಿಸ್‍ನಲ್ಲಿ ಜರುಗಿದ ಅಂತರರಾಷ್ಟ್ರಿಯ ಸಮ್ಮೇಳನದಲ್ಲಿ ಅತ್ಯುತ್ತಮ ವಿಷಯ ಮಂಡನೆ ಪ್ರಶಸ್ತಿ; ಅತ್ಯುತ್ತಮ ಸಂಶೋಧನೆಗಾಗಿ ಆರ್.ಕೆ.ವಿ.ವೈ. ವತಿಯಿಂದ ಪ್ರಶಂಸಾ ಪತ್ರ
ಪ್ರಕಟಣೆಗಳು: ಸಂಶೋಧನೆ/ ವಿಸ್ತರಣೆ/ ಇನ್ನಿತರ ಲೇಖನಗಳು 30.
ಸಂಪರ್ಕಿಸಿ:
ಪ್ರಾಂಶುಪಾಲರು,
ಪಶುಸಂಗೋಪನಾ ಪಾಲಿಟೆಕ್ನಿಕ್,
ಬರಗಿ, ಗುಂಡ್ಲುಪೇಟೆ ತಾಲ್ಲೂಕು
ಚಾಮರಾಜನಗರ ಜಿಲ್ಲೆ
ಕರ್ನಾಟಕ 571111
ಮಿಂಚಂಚೆ: ahpbargi@gmail.com
ಮೊಬೈಲ್ ಸಂಖ್ಯೆ: 8618067228 ಮತ್ತು 9916588675