ಸೌಲಭ್ಯಗಳು/ಸೇವೆಗಳು:
ಜಾನುವಾರುಗಳು:
ಕೇಂದ್ರದಲ್ಲಿ ನೂರಕ್ಕೂ ಹೆಚ್ಚು ದೇವಣಿ ತಳಿಗಳನ್ನು ಪೋಷಿಸಲಾಗುತ್ತಿದೆ. ಅವುಗಳ ಸಂತಾನೋತ್ಪತ್ತಿ ಮತ್ತು ಕಾರ್ಯಕ್ಷಮತೆಯ ವಿವರಗಳನ್ನು ದಾಖಲಿಸಿ, ಅವುಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಹಸುಗಳ ಆಯ್ಕೆ ಮಾಡಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಕೇಂದ್ರದಲ್ಲಿ ಅಧಿಕವಾಗಿರುವ ರಾಸುಗಳನ್ನು ರೈತರಿಗೆ ಹಾಗೂ ಇಲಾಖೆಗಳಿಗೆ ಈ ತಳಿಗಳ ಸಂತಾನಭಿವೃದ್ದಿಗಾಗಿ ನೀಡಲಾಗುತ್ತ್ತಿದೆ.
ಮೇವು:
ಈ ಕೇಂದ್ರದಲ್ಲಿ ಹೈಬ್ರಿಡ್ ನೇಪಿಯರ್ (ಸೂಪರ್ ನೇಪಿಯರ್, ಡಿಎಚ್‍ಎನ್-6, ಸಿಓ-4, ಯಶ್ವಂತ), ಗಿನಿ ಹುಲ್ಲು, ರೋಡ್ಸ್ಸ್ ಹುಲ್ಲು, ಮಲ್ಟಿಕಟ್ ಜೋಳ (ಸಿ.ಓ.ಎಫ್.ಎಸ್-29), ಬೇಲಿ ಮೆಂತೆ (ಹೆಡ್ಜ್ ಲುಸರ್ನ್), ಸ್ಟೈಲೋ ಹೆಮಾಟಾ, ಕುದುರೆ ಮೆಂತೆ, ಮೆಕ್ಕೆಜೋಳ, ಹಲಸಂದಿ, ಜೋಳ ಮತ್ತು ಮೇವಿನ ಮರಗಳನ್ನು ಸುಮಾರು 22 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ. ಉತ್ತಮ ಗುಣಮಟ್ಟದ ಮೇವಿನ ಬೀಜ, ಕಾಂಡ ಮತ್ತು ಬೇರುಗಳನ್ನು ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಮೇವು ಸಂಗ್ರ್ರಹಾಲಯ:
40ಕ್ಕೂ ಹೆಚ್ಚು ವಿವಿಧ ಪ್ರಭೇಧದ ಸುಧಾರಿತ ಮತ್ತು ಹೆಚ್ಚಿನ ಇಳುವರಿ ಹೊಂದಿರುವ ಮೇವಿನ ಬೆಳೆಯನ್ನು ಬೆಳೆಯಲಾಗುತ್ತಿದೆ. ಪ್ರತಿ ಮೇವಿನ ಬೆಳೆಯ ಉಪಯೋಗ, ಇಳುವರಿ ಮತ್ತು ಅವುಗಳ ಬೆಳೆಯುವ ಪದ್ದತಿಗಳ ಬಗ್ಗೆ ಮಾಹಿತಿ ಫಲಕಗಳನ್ನು ಅಳವಡಿಸಿದ್ದು ಮತ್ತು ಅವುಗಳನ್ನು ಬೆಳೆಸಲು ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ.
ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳು:
ರೆೃತರಿಗೆ ಮತ್ತು ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ರಾಜ್ಯದ ಪಶುವೈದ್ಯಕೀಯ ಕಾಲೇಜುಗಳ ಇಂಟರ್ನ್‍ಶಿಪ್ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಉತ್ತಮ ಸೌಕರ್ಯಗಳಿರುವ ತರಬೇತಿ ಸಭಾಂಗಣವಿದೆ.
ಪ್ರಯೋಗಾಲಯ:
ಕೇಂದ್ರದ ಪ್ರಯೋಗಾಲಯವು ಅತ್ಯಾಧುನಿಕ ಸೌಲಭ್ಯವುಳ್ಳ ಉಪಕರಣಗಳಾದ ಸ್ವಯಂಚಾಲಿತ ಹಾಲು ವಿಶ್ಲೇಷಕ ಯಂತ್ರ, ಸೂಕ್ಷ್ಮದರ್ಶಕ ಯಂತ್ರ, ಸಂಯುಕ್ತ ಸೂಕ್ಷ್ಮದರ್ಶಕ, ಸಮತೋಲಿತ ತೂಕ ಮಾಡುವ ಯಂತ್ರ ಮುಂತಾದವುಗಳನ್ನು ಹೊಂದಿದೆ.
ಸೇವಾ ಸಲಹೆಗಳು:
ಜಾನುವಾರುಗಳ ಉತ್ಪಾದನೆ ಹಾಗೂ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಈ ಕೇಂದ್ರದಲ್ಲಿ ಮಾಹಿತಿಯನ್ನು ಪಡೆಯಬಹುದು.