ಡಾ. ತಿರುಮಲೇಶ್. ಟಿ.
|
ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು |
ವೃತ್ತಿಯ ವಿವರ: |
1995 ರಲ್ಲಿ ಬೆಂಗಳೂರಿನ ರ್ಯಾಲಿಸ್ ಇಂಡಿಯಾ ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ. 1999 ರಿಂದ 2000ರವರೆಗೆ ಪಶುವೈದ್ಯಾಧಿಕಾರಿಯಾಗಿ ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವುದು. ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ 2000 ರಿಂದ 2009 ರವರೆಗೆ ಸಹಾಯಕ ಪ್ರಾಧ್ಯಾಪಕರಾಗಿ, 2009 ರಿಂದ 2011 ರವರೆಗೆ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಂತರ 2011 ರಿಂದ 2016 ರವರೆಗೆ ಪ್ರಾಧ್ಯಾಪಕರಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‍ನಲ್ಲಿ ಕಾರ್ಯನಿರ್ವಹಣೆ. 2016 ರಿಂದ 2021ರವರೆಗೆ ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಲೆನಾಡು ಗಿಡ್ಡಾ, ಕೋಳಿಗಳು, ಮೆಲುಕು ಹಾಕುವ ಸಣ್ಣ ಪ್ರಾಣಿಗಳು, ಆಹಾರವಾಗಿ ಮರದ ಎಲೆಗಳು, ಉಪ ಉತ್ಪನ್ನಗಳು, ಮೆಕ್ಕೆಜೋಳದ ಎಲೆಯ ರಸಮೇವು, ಬಹುವಾರ್ಷಿಕ ಮೇವಿನ ಬೆಳೆಗಳು ಇತ್ಯಾದಿ ವಿಷಯಗಳ ಕುರಿತು ಸಂಶೋಧನೆಯನ್ನು ಮಾಡುತ್ತಿದ್ದಾರೆ. 2021ರಿಂದ ಪಶುವೈದ್ಯಕೀಯ ಮಹಾವಿದ್ಯಾಲಯ ಗದಗದಲ್ಲಿ ಕಾರ್ಯನಿರ್ವಹಣೆ. ರೈತರು ಹಾಗೂ ಪಶುವೈದ್ಯಾಧಿಕಾರಿಗಳ ತರಬೇತಿ ಆಯೋಜನೆ. |
ಪ್ರಶಸ್ತಿಗಳು |
|
ಪ್ರಕಟಣೆಗಳು |
|