+91-8482-245241 regkvafsu@gmail.com

ಡಾ. ಅರುಣ್. ಎಸ್. ಜೆ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿ.ಹೆಚ್.ಡಿ., ಪೋಸ್ಟ್ ಡಾಕ್ಟರೇಟ್ (ಆಸ್ಟ್ರೇಲಿಯಾ)
ಮೊಬೈಲ್ ಸಂಖ್ಯೆ: +91 8095103170
ಮಿಂಚಂಚೆ: drarunsj@rediffmail.com

ವೃತ್ತಿಯ ವಿವರ:

2012ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಯೋಫಿಲ್ಮ್ ಲಸಿಕೆಗಳು, ರೋಗ ಮುನ್ಸೂಚನೆ, ಚರ್ಮದ ಕ್ಯಾನ್ಸರ್ ರೋಗಶಾಸ್ತ್ರ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ರೋಗನಿರೋಧಕ ಶಾಸ್ತ್ರದಂತಹ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸಂಶೋಧನೆ ಮತ್ತು ಬೋಧನಾ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವರು. ಭಾರತದಲ್ಲಿ ವಿವಿಧ ರಾಷ್ಟ್ರೀಯ ಸಮ್ಮೇಳನಗಳು ಮತ್ತು ಅಮೇರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿರುವರು.

ಪ್ರಶಸ್ತಿಗಳು:
  • ಎಂ.ವಿ.ಎಸ್.ಸಿ ಪದವಿಯಲ್ಲಿ ವಿಶ್ವವಿದ್ಯಾಲಯದ ಚಿನ್ನದ ಪದಕ ಮತ್ತು ಡಾ. ಆರ್. ಈಶ್ವರನ್ ಸ್ಮಾರಕ ಚಿನ್ನದ ಪದಕ.
  • ಆಸ್ಟ್ರೇಲಿಯಾದ ಶಿಕ್ಷಣ, ವಿಜ್ಞಾನ ಮತ್ತು ತರಬೇತಿ ಇಲಾಖೆ (ಡಿಇಎಸ್ಟಿ) ಮತ್ತು ಸಿಡ್ನಿ ವಿಶ್ವವಿದ್ಯಾಲಯದಿಂದ ಧನಸಹಾಯ,
  • 2005-08ರ ಅವಧಿಯ ‘ಎನ್‍ಡೀವರ್ ಇಂಟನ್ರ್ಯಾಷನಲ್ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿವೇತನ’ ಮತ್ತು ಅಂತರರಾಷ್ಟ್ರೀಯ ಸ್ನಾತಕೋತ್ತರ ಪ್ರಶಸ್ತಿ
  • ನವ ಡೈರಿ ಉತ್ಪನ್ನಗಳಿಗಾಗಿ ಇರುವ ಸಿ.ಆರ್.ಸಿ. (ಆಸ್ಟ್ರೇಲಿಯನ್ ಸರ್ಕಾರದ ಸಹಕಾರ ರಿಸರ್ಚ್ ಸೆಂಟರ್ ಪ್ರೋಗ್ರಾಂ) ಯವರಿಂದ ಸ್ನಾತಕೋತ್ತರ ವಿದ್ಯಾರ್ಥಿವೇತನ ಪ್ರಶಸ್ತಿ-2005.
  • ಐದನೇ ಅಂತರರಾಷ್ಟ್ರೀಯ ಹಾಲು ಜೀನೋಮಿಕ್ಸ್ ಮತ್ತು ಮಾನವ ಆರೋಗ್ಯ ಕುರಿತು ವಿಚಾರ ಸಂಕಿರಣದಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ 2008 ರ ಅಂತರರಾಷ್ಟ್ರೀಯ ಹಾಲು ಜೀನೋಮಿಕ್ಸ್ ಒಕ್ಕೂಟದ ವಿದ್ಯಾರ್ಥಿ ಪ್ರಯಾಣ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 15; ವಿಸ್ತರಣೆ ಫೋಲ್ಡರ್/ಜನಪ್ರಿಯ ಲೇಖನಗಳು 08; ವೈಜ್ಞಾನಿಕ ಪೋಸ್ಟರ್‌ಗಳು 16.