ಪಶುವೈದ್ಯಕೀಯ ಸೂಕ್ಷ್ಮಾಣುಜೀವಿ ವಿಜ್ಞಾನ ವಿಭಾಗ
ಪಶುವೈದ್ಯಕೀಯ ಸೂಕ್ಷ್ಮಾಣುಜೀವಿ ವಿಜ್ಞಾನ ವಿಭಾಗವು ಮೂರು ಪ್ರತ್ಯೇಕ ಪ್ರಯೋಗಾಲಯಗಳನ್ನು ಹೊಂದಿದೆ. ಪದವಿ ವಿದ್ಯಾರ್ಥಿಗಳ ಬೋಧನೆಗಾಗಿ ಬ್ಯಾಕ್ಟೀರಿಯಾ ಮತ್ತು ಮೈಕಾಲಜಿ ಪ್ರಯೋಗಾಲಯ, ಇಮ್ಯುನಾಲಜಿ ಪ್ರಯೋಗಾಲಯ ಮತ್ತು ವೈರಾಲಜಿ ಪ್ರಯೋಗಾಲಯಗಳು ಇವೆ. ಈ ವಿಭಾಗವು ಆಧುನಿಕ ಉಪಕರಣಗಳನ್ನು ಹೊಂದಿದೆ. ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಪ್ರಾಯೋಗಿಕ ತರಗತಿಗಳನ್ನು ನಡೆಸಲು ಎಲ್ಲಾ ಸೌಲಭ್ಯಗಳಿವೆ. ಸ್ನಾತಕ ವಿದ್ಯಾರ್ಥಿಗಳಿಗೆ ಬ್ಯಾಕ್ಟೀರಿಯಾಲಜಿ, ಮೈಕಾಲಜಿ, ಇಮ್ಯುನಾಲಜಿ, ವೈರಾಲಜಿ ಮತ್ತು ಜೈವಿಕ ತಂತ್ರಜ್ಞಾನದ ವಿಷಯಗಳನ್ನು ಬೋಧನೆ ಮಾಡಲಾಗುತ್ತಿದೆ.
©2019 copyright kvafsu.edu.in
Powered by : Premier Technologies