ಪಶುವೈದ್ಯಕೀಯ ಶಸ್ತ್ರಚಿಕಿತ್ಸಾ ಮತ್ತು ಕ್ಷ-ಕಿರಣ ವಿಜ್ಞಾನ ವಿಭಾಗ
ಪಶುವೈದ್ಯಕೀಯ ಶಸ್ತ್ರಚಿಕಿತ್ಸಾ ಮತ್ತು ಕ್ಷ-ಕಿರಣ ವಿಭಾಗವು ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧನಾ ಕಾರ್ಯವನ್ನು ನಿರ್ವಹಿಸುತ್ತಿದೆ. ಪಶುಸಂಗೋಪನಾ ಇಲಾಖೆಯ ಪಶುವೈದ್ಯರಿಗೆ ಶಸ್ತ್ರಚಿಕಿತ್ಸೆ ಮತ್ತು ರೋಗನಿರ್ಣಯ ಕುರಿತು ತರಬೇತಿ ನೀಡುತ್ತಿದೆ. ಸಣ್ಣ ಪ್ರಾಣಿಗಳ ಹಾಗೂ ದೊಡ್ಡ ಪ್ರಾಣಿಗಳ ಶಸ್ತ್ರಚಿಕಿತ್ಸೆಗೆ, ರೋಗಪತ್ತೆಗೆ, ಪಶುಗಳ ಮೃದು ಅಂಗಾಂಶ ಮತ್ತು ಮೂಳೆಗಳ ಶಸ್ತ್ರಚಿಕಿತ್ಸೆಗೆ ಬೇಕಾಗುವ ಉಪಕರಣಗಳ ಸೌಲಭ್ಯವಿದೆ. ದೂರವಾಣಿ ಮೂಲಕ ರೈತರಿಗೆ, ಮುದ್ದು ಪ್ರಾಣಿಗಳ ಮಾಲೀಕರಿಗೆ, ಕ್ಷೇತ್ರ ಪಶುವೈದ್ಯರಿಗೆ ಹಾಗೂ ವನ್ಯಜೀವಿ ಪಶುವೈದ್ಯರುಗಳಿಗೆ ಪಶುವೈದ್ಯಕೀಯ ವಿಷಯದಲ್ಲಿ ಸಮಾಲೋಚನೆ ಹಾಗೂ ಸಲಹೆ ನೀಡಲಾಗುತ್ತಿದೆ.
©2019 copyright kvafsu.edu.in
Powered by : Premier Technologies