ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ
ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗವು ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸ್ನಾತಕ ಪದವಿಯ ವಿದ್ಯಾರ್ಥಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ತಾಂತ್ರಿಕತೆ, ಉಣ್ಣೆ ತಾಂತ್ರಿಕತೆ, ವಧಾಗೃಹಗಳ ನಿರ್ವಹಣೆ ಮತ್ತು ಆಚರಣೆಗಳು, ಉಪ ಉತ್ಪನ್ನಗಳ ತಯಾರಿಕಾ ತಾಂತ್ರಿಕತೆ ಮತ್ತು ಮಾಂಸ ವಿಜ್ಞಾನಗಳ ಪಠ್ಯಗಳನ್ನು ಬೋಧಿಸಲಾಗುತ್ತಿದೆ. ಮೌಲ್ಯಾಧಾರಿತ ಉತ್ಪನ್ನಗಳ ಸಂಶೋಧನೆ ನಡೆಯುತ್ತಿದೆ. ರೈತರು ಮತ್ತು ನಿರುದ್ಯೋಗಿಗಳಿಗೆ ಉದ್ಯಮಶೀಲತಾ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ.
©2019 copyright kvafsu.edu.in
Powered by : Premier Technologies