ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ
ಹಾಲು ವಿಜ್ಞಾನ, ಮಾಂಸ ವಿಜ್ಞಾನ, ವಧಾಗ್ರಹ ಚಟುವಟಿಕೆಗಳು, ಉತ್ಪನ್ನಗಳ ತಂತ್ರಜ್ಞಾನ ಅಧ್ಯಯನಗಳ ಜೊತೆಗೆ ಜಾನುವಾರು ಆಧಾರಿತ ಆಹಾರ ಉತ್ಪನ್ನಗಳ ಕುರಿತು ಸ್ನಾತಕ ಮಟ್ಟದಲ್ಲಿ ಬೋಧನೆ. ಉದ್ಯಮಶೀಲತಾ ತರಬೇತಿ ಕಾರ್ಯಕ್ರಮವನ್ನು ನೀಡಲಾಗುತ್ತಿದೆ. ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿ, ಉತ್ಪನ್ನ ಬಳಕೆ ಮತ್ತು ನಿರಂತರ ತರಬೇತಿಯ ಮೂಲಕ ಪೌಷ್ಠಿಕಾಂಶದ ಸುರಕ್ಷತೆ ಮತ್ತು ಸುಸ್ಥಿರ ಜಾನುವಾರು ಉತ್ಪಾದನೆಯನ್ನು ಸಾಧಿಸಲು ವಿಭಾಗವು ಸಲಹೆ ನೀಡುತ್ತಿದೆ. ಗುಣಮಟ್ಟ ಮತ್ತು ಸುರಕ್ಷತೆಗಾಗಿ ಕಚ್ಚಾ ವಸ್ತುಗಳು ಮತ್ತು ಉತ್ಪನ್ನಗಳನ್ನು ಪರೀಕ್ಷಿಸಲು ಪ್ರಯೋಗಾಲಯದ ಜೊತೆಗೆ ಮಾಂಸ, ಹಾಲು ಮತ್ತು ಮೊಟ್ಟೆಯನ್ನು ವಿವಿಧ ಮೌಲ್ಯವರ್ಧಿತ ಉತ್ಪನ್ನಗಳಾಗಿ ಸಂಸ್ಕರಿಸುವ ಎಲ್ಲಾ ಸಾಧನಗಳನ್ನು ವಿಭಾಗವು ಹೊಂದಿದೆ. ಆರೋಗ್ಯಕರ ಮಾಂಸ, ಮಾಂಸ ಪ್ರೋಟಿಯೋಮಿಕ್ಸ್, ಮಾಂಸದಲ್ಲಿನ ಗುಣಮಟ್ಟದ ಬದಲಾವಣೆಗಳನ್ನು ದೀರ್ಘಾವಧಿಯ ಗುರಿಯೊಂದಿಗೆ ಅಧ್ಯಯಿಸುವುದು ವಿಭಾಗದ ಸಂಶೋಧನಾ ಆಧ್ಯತೆಗಳಾಗಿವೆ.
ವಧಾಗ್ರಹ ಆಧುನೀಕರಣ, ಕೋಳಿ ಸಂಸ್ಕರಣೆ ಮತ್ತು ಮೌಲ್ಯವರ್ಧನ ಘಟಕಗಳ ಸ್ಥಾಪನೆ, ಕಸಾಯಿಖಾನೆ ತ್ಯಾಜ್ಯ ವಿಲೇವಾರಿ, ಮಾಂಸ ಜಾತಿಗಳ ಗುರುತಿಸುವಿಕೆ ಮತ್ತು ಕಲಬೆರಕೆ ಪತ್ತೆ, ಜಾನುವಾರು ಆಹಾರ ಉತ್ಪನ್ನಗಳ ಗುಣಮಟ್ಟ ವಿಶ್ಲೇಷಣೆ, ಆರೋಗ್ಯಕರ ಮಾಂಸ, ಹಾಲು, ಮೊಟ್ಟೆ ಉತ್ಪಾದನೆ ಮತ್ತು ಸಂಸ್ಕರಣೆ ಚಟುವಟಿಕೆಗಳ ವಿವಿಧ ಅಂಶಗಳ ಮೇಲೆ ತಾಂತ್ರಿಕ ಸಲಹೆಗಳನ್ನು ನೀಡಲಾಗುತ್ತಿದೆ.