+91-8482-245241 regkvafsu@gmail.com

ಡಾ. ಪ್ರಭು, ಟಿ. ಎಂ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ., ಪಿ.ಹೆಚ್.ಡಿ.,
ಮೊಬೈಲ್ ಸಂಖ್ಯೆ: 9449252468
ಮಿಂಚಂಚೆ: prabhutmann@gmail.com

ವೃತ್ತಿಯ ವಿವರ:

ಪ್ರಾಣಿ ಆಹಾರಶಾಸ್ತ್ರ ವಿಷಯದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಕಾರ್ಯದಲ್ಲಿ ನಿರತರಾಗಿದ್ದು 15 ವಿದ್ಯಾರ್ಥಿಗಳ ಸ್ನಾತಕೋತ್ತರ ಸಂಶೋಧನೆಗೆ ಪ್ರಧಾನ ಮಾರ್ಗದರ್ಶನವನ್ನು ಮಾಡಿರುವರು ಮತ್ತು 22 ವರ್ಷಗಳ ಅನುಭವವನ್ನು ಹೊಂದಿರುತ್ತಾರೆ. ಆಹಾರ ಪದಾರ್ಥಗಳಲ್ಲಿರುವ ವಿಷ ವಸ್ತುಗಳ ನಿರ್ಮೂಲನೆ ಅಥವಾ ನಿಷ್ಕ್ರಿಯಗೊಳಿಸುವ ತಾಂತ್ರಿಕತೆಗಳನ್ನು ಅಭಿವೃದ್ಧಿಗೊಳಿಸಿ, ಕೃಷಿ - ಅರಣ್ಯ ಮೂಲದ ತ್ಯಾಜ್ಯಗಳು ಹಾಗೂ ಅನೇಕ ಅಸಂಪ್ರದಾಯಿಕ ಪದಾರ್ಥಗಳನ್ನು ಬಳಸಿ ಸುಸ್ಥಿರ ಜಾನುವಾರು ಉತ್ಪಾದನೆಗಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಸುಮಾರು 150 ತಾಂತ್ರಿಕ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ.

ಪ್ರಶಸ್ತಿಗಳು:
  • 2002-03: ಎನ್. ಡಿ. ಕೇಹರ್ ಪ್ರಶಸ್ತಿ.
  • 2003: ಅತ್ಯುತ್ತಮ ಸ್ನಾತಕೋತ್ತರ ಕೃಷಿ ಸಂಶೋಧನೆಗಾಗಿ ಜವಾಹರಲಾಲ್ ನೆಹರು (ICAR) ಪ್ರಶಸ್ತಿ;
  • 2013: ಕರ್ನಾಟಕ ವಿಜ್ಞಾನ ಸಮಾವೇಶದಲ್ಲಿ ಯುವ ವಿಜ್ಞಾನಿ ಪ್ರಶಸ್ತಿ.
  • 2019: ಕರ್ನಾಟಕ ಪಶುವೈದ್ಯಕೀಯ ಸಂಘದಿಂದ ಶ್ರೇಷ್ಠ ಪಶುವೈದ್ಯ (ನಕುಲ) ಪ್ರಶಸ್ತಿ;
  • ರಾಷ್ಟ್ರೀಯ ಮತ್ತು ಅಂತರರಾಷ್ತ್ರೀಯ ಸಮಾವೇಶಗಳಲ್ಲಿ ಉತ್ತಮ ಲೇಖನ ಮತ್ತು ಪ್ರಬಂಧ ಮಂಡನೆಗೆ ಐದು ಬಾರಿ ಪ್ರಶಸ್ತಿ;
  • 2016: ಭಾರತದ ಪ್ರಾಣಿ ಆಹಾರಶಾಸ್ತ್ರ ಸಂಘ (ANA, India) ದಿಂದ ಫೆಲೋ ಪುರಸ್ಕಾರ (FANA) ಸಂದಿವೆ.
ಪ್ರಕಟಣೆಗಳು
  • ಸಂಶೋಧನಾ ಲೇಖನ 60; ವಿಸ್ತರಣೆ 50; ಇನ್ನಿತರ ಲೇಖನಗಳು 40.