ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ವಿಜ್ಞಾನ ವಿಭಾಗ
ವಿಭಾಗವು 1962ರಲ್ಲಿ ಸ್ಥಾಪನೆಯಾಗಿದ್ದು ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸುಗಳ ಅಧ್ಯಯನಕ್ಕೆ ಸುಸಜ್ಜಿತ ಪ್ರಯೋಗಾಲಯ ಮತ್ತು ಅಗತ್ಯ ಶಸ್ತ್ರಚಿಕಿತ್ಸೆಗಳಿಗೆ ಆಪರೇಷನ್ ಥಿಯೇಟರ್ ಸೌಲಭ್ಯಗಳನ್ನು ಹೊಂದಿದೆ. ಬೆಂಗಳೂರು ಮತ್ತು ನೆರೆಯ ಜಿಲ್ಲೆಗಳ ಜಾನುವಾರುಗಳಿಗೆ ವಿವಿಧ ಚಿಕಿತ್ಸಾ ಸೌಲಭ್ಯಗಳಾದ ಕೃತಕ ಗರ್ಭಧಾರಣೆ, ಗರ್ಭಪರೀಕ್ಷೆ, ಗರ್ಭಕೋಶ, ಗರ್ಭಧಾರಣೆ, ಸಂತಾನೋತ್ಪತ್ತಿಗೆ ಸಂಬಂಧಿಸಿದ ರೋಗನಿರ್ಣಯ, ಬಂಜೆತನದ ತನಿಖೆ, ಹೆರಿಗೆ ಸಂದರ್ಭದ ಸಂಕಷ್ಟದಲ್ಲಿ ಸೂಕ್ತಚಿಕಿತ್ಸೆ, ಪ್ರಸೂತಿ, ಜಾನುವಾರುಗಳಲ್ಲಿ ಅಲ್ಟ್ರ್ರಸೋನೋಗ್ರಫಿ; ಮುದ್ದುಪ್ರಾಣಿಗಳ ಸಂಯೋಗಕ್ಕೆ ಸೂಕ್ತ ಸಮಯ ನಿರ್ಣಯ, ಎಂಡೋಸ್ಕೋಪಿ, ಸಹಾಯದ ಸಂಯೋಗ, ಜನನ ನಿಯಂತ್ರಣ ಕಾರ್ಯವಿಧಾನಗಳು ಮತ್ತು ಮುದ್ದು ಪ್ರಾಣಿಗಳ ಪ್ರಸೂತಿ ಮತ್ತು ಜನನಾಂಗದ ಶಸ್ತ್ರಚಿಕಿತ್ಸೆಗಳಿಗೆ ಸೇವೆಯನ್ನು ಒದಗಿಸಲಾಗುತ್ತಿದೆ. ಅಲ್ಲದೇ, ಪ್ರಕಟಣೆ, ಆರೋಗ್ಯ ಶಿಬಿರಗಳು, ತರಬೇತಿ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಗೋಪಾಲಕರು ಮತ್ತು ಮುದ್ದುಪ್ರಾಣಿಗಳ ಮಾಲೀಕರಿಗೆ ವಿಸ್ತರಣಾ ಸೇವೆಗಳು ಮತ್ತು ವಿಚಾರ ಸಂಕಿರಣ, ಸಂವಾದನಾತ್ಮಕ ಅಧಿವೇಶನಗಳು ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸರ್ಕಾರದ ಇಲಾಖೆಯ ಪಶುವೈದ್ಯರಿಗೆ ಮುಂದುವರೆದ ಶಿಕ್ಷಣವನ್ನು ಒದಗಿಸಲಾಗುತ್ತಿದೆ.