ವನ್ಯಜೀವಿ ವಿಜ್ಞಾನ ವಿಭಾಗ
ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯನ್ನು ಕೊಡುಗು ಜಿಲ್ಲೆಯ ಕುಶಾಲನಗರದ ಬಳಿಯ ದೊಡ್ಡಾಲುವಾರದಲ್ಲಿ 2007 ರಲ್ಲಿ ಪ್ರಾರಂಭಿಸಲಾಯಿತು. ಪಶುವೈದ್ಯರಿಗೆ ವನ್ಯಜೀವಿಗಳ ವಿಜ್ಞಾನದಲ್ಲಿ ಮಾಸ್ಟರ್ಸ್ ಪದವಿಯನ್ನು ಬೋಧಿಸುವ, ಸಂಶೋಧನೆ ಕೈಗೊಳ್ಳುವ, ಪಶುವೈದ್ಯರಿಗೆ ತರಬೇತಿ ಹಾಗೂ ವಿವಿಧ ವಿಸ್ತರಣೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶಗಳು ಈ ಸÀಂಸ್ಥೆಗಿವೆ.
ಸಂಸ್ಥೆಯ ಉದ್ದೇಶಗಳ ಸಾಕಾರಕ್ಕಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ವನ್ಯಜೀವಿ ವಿಜ್ಞಾನ ವಿಭಾಗವನ್ನು ಆರಂಭಿಸಲಾಯಿತು. ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನ, ಪಶುವೈದ್ಯಕೀಯ ಅಂಗರಚನಾ ವಿಜ್ಞಾನ ವಿಭಾಗ, ಪಶುವೈದ್ಯಕೀಯ ಶರೀರಕ್ರಿಯಾ ವಿಜ್ಞಾನ, ಪಶುವೈದ್ಯಕೀಯ ಔಷಧ ಮತ್ತು ವಿಷ ವಿಜ್ಞಾನ ವಿಭಾಗ, ಪಶು ಆಹಾರ ವಿಜ್ಞಾನ ವಿಭಾಗ, ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ವಿಜ್ಞಾನ ವಿಭಾಗ, ಜಾನುವಾರು ಉತ್ಪಾದನೆ ನಿರ್ವಹಣೆ ವಿಭಾಗ, ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ವಿಜ್ಞಾನ ವಿಭಾಗ, ಪಶುವೈದ್ಯಕೀಯ ಶಸ್ತ್ರ ಚಿಕಿತ್ಸಾ ಮತ್ತು ಕ್ಷ – ಕಿರಣ ವಿಭಾಗ ಮುಂತಾದ ವಿಭಾಗಗಳು ವನ್ಯಜೀವಿ ವಿಜ್ಞಾನದ ಮಾಸ್ಟರ್ಸ್ ಪದವಿಯ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ.
ವನ್ಯಜೀವಿ ವಿಜ್ಞಾನದಲ್ಲಿ ಇಲ್ಲಿಯವರೆಗೆ ಸುಮಾರು 25 ಪಶುವೈದ್ಯರು ಮಾಸ್ಟರ್ಸ್ ಪದವಿಯನ್ನು ಪಡೆದಿದ್ದಾರೆ.