+91-8482-245241 regkvafsu@gmail.com

ಡಾ. ಮಧುಸೂದನ್, ಹೆಚ್. ಎಸ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9886811399
ಮಿಂಚಂಚೆ: hsmsgowda@gmail.com

ವೃತ್ತಿಯ ವಿವರ:

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ 2010 ರಿಂದ 2012 ರ ವರೆಗೆ ಸೇವೆ ಸಲ್ಲಿಸಿರುತ್ತಾರೆ. 2012 ರಿಂದ 2018ರ ವರೆಗೆ ಪಶುವೈದ್ಯಕೀಯ ಮಹಾವಿದ್ಯಾಲಯ, ಹಾಸನದಲ್ಲಿ ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 2018-19 ರಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. 2019 ರಿಂದ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ, ಬೆಂಗಳೂರಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆಗೆ ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿಗಳು:
  • ಕಪಪಮೀವಿವಿ, ಬೀದರ 2007 ಹಾಗೂ 2010ರ ಸಾಲಿನ ಪಶು ಆಹಾರಶಾಸ್ತ್ರ ವಿಭಾಗದ ಸ್ನಾತಕೋತ್ತರ ಮತ್ತು ಪಿ.ಹೆಚ್.ಡಿ. ಪದವಿಗೆ ವಿಶ್ವವಿದ್ಯಾಲಯದ ಚಿನ್ನದ ಪದಕ;
  • 2017 ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಉತ್ತಮ ಭಿತ್ತಿಚಿತ್ರ ಪ್ರಶಸ್ತಿ;
  • 2018 ಎಮ್.ಪಿ.ಕೆ.ವಿ. ಆಯೋಜಿಸಿದ್ದ ಪಿ.ಎಸ್.ಎ.ಆರ್. ವಿಚಾರ ಸಂಕಿರಣದಲ್ಲಿ ಉತ್ತಮ ಮೌಖಿಕ ಸಂಶೋಧನಾ ವಿಚಾರ ಮಂಡನೆ ಪ್ರಶಸ್ತಿ;
  • ಕಪಪಮೀವಿವಿ, ಬೀದರನ 2017-18 ನೇ ಸಾಲಿನ ಸಂಶೋಧನಾ ಯೋಜನೆಗೆ ನೀಡಲಾಗುವ ಮೆರಿಟ್ ಪ್ರಮಾಣ ಪತ್ರ.
ಪ್ರಕಟಣೆಗಳು
  • ಸಂಶೋಧನಾ ಲೇಖನ 15; ವಿಸ್ತರಣಾ ಲೇಖನ 25; ಇನ್ನಿತರ ಲೇಖನಗಳು 15.