+91-8482-245241 regkvafsu@gmail.com

ಜಲ ಪರಿಸರ ನಿರ್ವಹಣಾ ವಿಭಾಗ

ವಿಭಾಗವು ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ನೀಡುತ್ತದೆ. ಹವಾಮಾನಶಾಸ್ತ್ರ ಮತ್ತು ಭೂಗೋಳಶಾಸ್ತ್ರ, ಮಣ್ಣು ಮತ್ತು ರಸಾಯನಶಾಸ್ತ್ರ, ಲಿಮ್ನಾಲಜಿ, ಸಾಗರ ಜೀವಶಾಸ್ತ್ರ, ಜೀವ ವೈವಿಧ್ಯ ಮತ್ತು ಪರಿಸರ ವಿಜ್ಞಾನ, ಮೀನುಗಾರಿಕಾ ಸಾಗರ ಶಾಸ್ತ್ರ, ಕರಾವಳಿ ವಲಯ ಮತ್ತು ವಿಪತ್ತು ನಿರ್ವಹಣೆ, ಜಲಮಾಲಿನ್ಯ, ಪರಿಸರ ಪ್ಲಾಂಕ್ಟಾನ್ ಟೆಕ್ನಾಲಜಿ, ಜಲಚರ ವಿಜ್ಞಾನ, ಜಲವಿಜ್ಞಾನ, ಪರಿಸರ ಮರುಸ್ಥಾಪನೆ ವಿಜ್ಞಾನ ಮುಂತಾದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‍ಗಳ ಬೋಧನೆಯನ್ನು ಮಾಡುತ್ತಿದೆ.

ಸಂಶೋಧನೆ
• ಪರಿಸರ ಶಾಸ್ತ್ರದ ಅಧ್ಯಯನಗಳು
• ಕರಾವಳಿ ನೀರಿನ ಮೇಲ್ವಿಚಾರಣೆ
• ಪರಿಸರದ ಮೇಲಿನ ಪ್ರಭಾವಗಳ ಮೌಲ್ಯಮಾಪನ ಮತ್ತು ಅಧ್ಯಯನ
• ನದಿ ಮತ್ತು ನದೀಮುಖ ನೀರಿನ ಗುಣಮಟ್ಟದ ಮೇಲ್ವಿಚಾರಣೆ
• ಸಮಗ್ರ ಕರಾವಳಿ ವಲಯ ನಿರ್ವಹಣೆ

ಸೌಲಭ್ಯಗಳು
• ಪ್ಲಾಂಕ್ಟನ್ ವಿಶ್ಲೇಷಣೆ
• ಬೆಂಥೋಸ್ ವಿಶ್ಲೇಷಣಾ ಸಾಧನ
• ವಿಷಕಾರಿ ರಾಸಾಯನಿಕಗಳ ವಿಶ್ಲೇಷಣೆ ಪ್ರಯೋಗಾಲಯ
• ಒತ್ತಡ, ತಾಪಮಾನ, ಕಾರ್ಬನ್ ಡೈಆಕ್ಸೆಡ್‍ನ ಮಟ್ಟ ಮತ್ತು ತೇವಾಂಶ ಸಂವೇದಕಗಳು
• ನೀರಿನ ಗುಣಮಟ್ಟದ ನಿಯತಾಂಕಗಳನ್ನು ಅಳೆಯಲು ಪೆÇೀರ್ಟಬಲ್ ಕಿಟ್

ಸೇವೆಗಳು
• ಕರಾವಳಿ ನೀರಿನ ಮೇಲ್ವಿಚಾರಣೆ
• ಜಲವಾಸಿ ಜೈವಿಕ ವೈವಿಧ್ಯತೆಯಲ್ಲಿ ಸಂಶೋಧನೆ
• ಪರಿಸರ, ವಿಷಶಾಸ್ತ್ರ ಮತ್ತು ಜಲವಾಸಿ ಮಾಲಿನ್ಯ
• ಪರಿಸರ ನೀತಿ ನಿರ್ಧಾರಕ್ಕೆ ಸೇವಾ ಬೆಂಬಲ